ಐ. ಟಿ. ಡಿ. ಪಿ [ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ]

ಸಮಗ್ರ ಬುಡಕಟ್ಟು ಅಭಿವೃದ್ಧಿ ನಿಯೋಗವು ಬುಡಕಟ್ಟು ಜನರ ಸಮಸ್ಯೆಯ ಒಂದು ವಿವರವಾದ ಮತ್ತು ಸಮಗ್ರ ವಿಮರ್ಶೆಯನ್ನು ಐದನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಮುನ್ನಾದಿನದಂದು ಕೈಗೆತ್ತಿಕೊಂಡಿತು.

ಐಟಿಡಿಎಯ ಮುಖ್ಯ ಉದ್ದೇಶ ಮೂಲಸೌಕರ್ಯ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಆದಾಯ ಉತ್ಪಾದಿಸುವ ಯೋಜನೆಗಳ ಮೂಲಕ ಬುಡಕಟ್ಟು ಸಮುದಾಯಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಮತ್ತು ಶೋಷಣೆ ವಿರುದ್ಧ ಬುಡಕಟ್ಟು ಸಮುದಾಯಗಳ ರಕ್ಷಣೆ.

ಐ . ಟಿ . ಡಿ .ಪಿ. ಪರಿಶಿಷ್ಟರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮತ್ತು ರಕ್ಷಣೆಗೆ ಕೆಲಸ ಮಾಡುತ್ತದೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಕಾರ್ಯವ್ಯಾಪ್ತಿಯಲ್ಲಿ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳು ಒಳಗೊಡಿವೆ. 2001ನೇ ಜನಗನತಿಯ ಪ್ರಕಾರ 62938 ಪರಿಶಿಷ್ಟ ವರ್ಗದ ಜನಸಂಖ್ಯೆ ಈ ತಾಲೂಕುಗಳಲ್ಲಿದೆ. ಪರಿಶಿಷ್ಟ ವರ್ಗದ ಜನಾಂಗದವರ ಪೈಕಿ ಮರಾ­, ಪರಿಶಿಷ್ಟ ವರ್ಗದ ಜನಾಂಗದವರ ಪೈಕಿ ಮರಾ¬¬¬, -ಮಲೆಕುಡಿಯ ಹಾಗು ಕೊರಗ ಜನಗದವರು ಹೆಚ್ಚಾಗಿ ವಾಸಿಸುತ್ತಿದ್ದು, ಇವರಲ್ಲಿ ಆಡಿಯುಗ ಪಂಗಡಕ್ಕೆ ಸೇರಿದ ಕೊರಗ ಜನಾಂಗದವರು ಅತ್ತೀ ಹಿಂದುಳಿದವರಾಗಿರುತ್ತಾರೆ

ಪುತ್ತೂರು ಐ. ಟಿ. ಡಿ. ಪಿ. ವಿಭಾಗದಲ್ಲಿ ಪರಿಶಿಷ್ಟ ವರ್ಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 9 ಪರಿಶಿಷ್ಟ ವರ್ಗದ ವಿಧ್ಯಾರ್ಥಿನಿಲಯಗಳು, 2 ಮೆಟ್ರಿಕ್ ನಂತರದ ವಿಧ್ಯಾರ್ಥಿನಿಲಯಗಳು, 12 ಆಶ್ರಮಶಾಲೆಗಳು, 1 ಮಹಿಳಾ ಕಲ್ಯಾಣ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 395 ಮಕ್ಕಳು ವಿಧ್ಯಾರ್ಥಿನಿಲಯಗಳಲ್ಲಿ, 1075 ಮಕ್ಕಳು ಆಶ್ರಮಶಾಲೆಗಳಲ್ಲಿ ಹಾಗು 26 ಮಕ್ಕಳು ಮಹಿಳಾ ಕಲ್ಯಾಣ ಕೇಂದ್ರದಲ್ಲಿ, 131 ವಿಧ್ಯಾರ್ಥಿಗಳು ಮೆಟ್ರಿಕ್ ನಂತರದ ವಿಧ್ಯಾರ್ಥಿನಿಲಯಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಐ. ಟಿ. ಡಿ. ಪಿ ಪ್ರಮುಖ ಯೋಜನೆಗಳೆಂದರೆ:

  • ಪೌಷ್ಟಿಕ ಆಹಾರ ಧಾನ್ಯಗಳನ್ನು ಒದಗಿಸುವುದು
  • ಶೈಕ್ಷಣಿಕ ಯೋಜನೆ
  • ಉದ್ಯೋಗ

ವಿಳಾಸ

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ
ಮಂಗಳೂರು ಕಚೇರಿ
ಅಬ್ಬಕ್ಕನಗರ
ಮಂಗಳೂರು - 575006

ಸಂಪರ್ಕ ವಿವರಗಳು

ದೂರವಾಣಿ ಸಂಖ್ಯೆ : 0824 - 2451269
ಫ್ಯಾಕ್ಸ್ : 0824 - 2450114
E - mail : pcoitdp.dk@gmail.com
Website : www.itdpdk.com