ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗವಾಗಿರುವ ಕೊರಗ ಸಮುದಾಯವು ತಮ್ಮ ವಿಶಿಷ್ಟ ಜೀವನ ಶೈಲಿಯಿಂದ ಇತರರಿಗಿಂತ ಬಿನ್ನವಾಗಿದ್ದಾರೆ. ತಮ್ಮದೇ ಆದ ಖಚಿತ ಭಾಷೆ, ಸಂಸ್ಕೃತಿಯನ್ನು ಹೊಂದಿರುವ ಈ ಸಮುದಾಯವು ಬುಡಕಟ್ಟಿನ ಮೂಲ ಸ್ವರೂಪವನ್ನು ಬಿಟ್ಟು ಕೊಡದೇ ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಂಡು ಇದೀಗ ಅವರು ಜನರ ನಡುವೆ ಬದುಕುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗು ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯವು ಮುಖ್ಯ ವಾಹಿನಿಯಲ್ಲಿ ಬೆರೆತು ಇತರರಿಗೆ ಸರಿಸಮಾನವಾಗಿ ಬದುಕಲು ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಕುಡಿತ, ಬಡತನ, ಅನಕ್ಷರತೆ ಸಾಂಪ್ರಾದಾಯಿಕ ನಂಬಿಕೆಗಳು ಕೊರಗ ಸಮುದಾಯದ ಬದುಕನ್ನು ಜರ್ಜರಿತಗೊಲಿಸಿವೆ. ಕೇಂದ್ರ ಸರಕಾರವು 1986 ರಲ್ಲೇ ಕೊರಗ ಸಮುದಾಯವನ್ನು ಮೂಲನಿವಾಸಿ ಬುಡಕಟ್ಟು ಜನಾಂಗವೆಂದು (Primitive Tribe) ಎಂದು ಘೋಷಿಸಿದೆ.

ಇತ್ತಿಚಿನ ವರ್ಷಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರವು ಕೊರಗ ಸಮುದಾಯದ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ನೀಡಿ ಅನೇಕ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  2008 - 09ನೇ ಸಾಲಿನಿಂದ ಹಲವಾರು  ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.  ಕೊರಗ ಕುಟುಂಬಗಳಿಗೆ ವಸತಿ ಸೌಲಭ್ಯ, ಕೊರಗ ವಿದ್ಯಾಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಸಹಾಯಧನ, ಕೊರಗ ಮಕ್ಕಳಿಗೆ ಬೇಸಿಗೆ ಶಿಬಿರ, ಮದ್ಯವಿಮುಕ್ತ ಶಿಬಿರ, ಕೈಮಗ್ಗ ತರಬೇತಿ, ಉದ್ಯಮಶೀಲತಾ ತರಬೇತಿ, ವಿದ್ಯುತ್ ಸಂಪರ್ಕ, ವೈದ್ಯಕೀಯ ವೆಚ್ಚ ಮರುಪಾವತಿ, ಪೌಷ್ಟಿಕ ಆಹಾರ ವಿತರಣೆ ಅಲ್ಲದೇ ಕೊರಗ ಕಾಲೋನಿಗಳಿಗೆ ಮೂಲಭೂತ ಸೌಕರ್ಯ ಹೀಗೆ ಹಲವಾರು ಕಾರ್ಯಕ್ರಮಗಳನ್ನು ದ. ಕ. ಜಿಲ್ಲೆಯಲ್ಲಿ ಅನುಷ್ಟಾನ ಮಾಡಲಾಗುತ್ತಿದೆ.

ದ. ಕ. ಜಿಲ್ಲೆಯ 5 ತಾಲೂಕುಗಳ 2001ರ ಜನಗಣತಿ ಪ್ರಕಾರ ಕೊರಗ ಸಮುದಾಯದ ಜನಸಂಖ್ಯೆ  6337 ಆಗಿರುತ್ತದೆ. ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ದ. ಕ. ಜಿಲ್ಲಾಪಂಚಾಯತ್, ಮಂಗಳೂರು, ಇವರ ಆದೇಶ ಪ್ರಕಾರ 2012ರ ಫೆಬ್ರವರಿ ತಿಂಗಳಲ್ಲಿ ಗ್ರಾಮ ಮಟ್ಟದ ಪಂಚಾಯತ್ ಅಭಿವೃದ್ಧಿ  ಅಧಿಕಾರಿ/ಕಾರ್ಯದರ್ಶಿ/ ಸ್ಥಳಿಯ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರು ಹಾಗು ಕೊರಗ ಪ್ರತಿನಿಧಿಗಳು ಪ್ರತಿ ಗ್ರಾಮ ಪಂಚಯಾತ್ ನ ಗ್ರಾಮಗಳಲ್ಲಿ ಇರುವ ಕೊರಗ ಕುಟುಂಬಗಳ ಸಮೀಕ್ಷೆಯನ್ನು ಪ್ರಾರಂಭಿಸಿ ಕೊರಗ ಕುಟುಂಬಗಳಿಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಿರುತ್ತಾರೆ. 

ಈ ಸಮೀಕ್ಷೆ ಪ್ರಕಾರ ಕೆಳಕಂಡಂತೆ ಜಿಲ್ಲೆಯ 5  ತಾಲೂಕುಗಳಲ್ಲಿ ಕೊರಗ ಸಮುದಾಯದ ಜನಸಂಖ್ಯೆ ಇರುತ್ತದೆ.

ಕೊರಗ  ಜನಸಂಖ್ಯಾ ಮಾಹಿತಿ

 

ಕ್ರ ಸ ತಾಲೂಕಿನ ಹೆಸರು ಜನಸಂಖ್ಯೆ ಜನಸಂಖ್ಯೆ
ಗಂಡು ಹೆಣ್ಣು ಓಟ್ಟು
1   ಮಂಗಳೂರು(ನಗರ) 271 621 583 1204
    ಮಂಗಳೂರು(ಗ್ರಾ) 503 1088 1114 2202
2   ಬಂಟ್ವಾಳ 187 294 278 572
3   ಪುತ್ತೂರು 100 206 190 396
4   ಬೆಳ್ತಂಗಡಿ 113 195 188 383
5   ಸುಳ್ಯ 32 61 40 101
    ಓಟ್ಟು 1206 2465 2393 4858