ಕಾನೂನು ಪದವೀಧರರಿಗೆ ಧನಸಹಾಯ

ಪರಿಶಿಷ್ಟ ಪಂಗಡಕ್ಕೆ ಸೇರಿದ ನಿರುದ್ಯೋಗಿ ಕಾನೂನು ಪದವೀಧರರು ಸ್ವತಂತ್ರವಾಗಿ ವಕೀಲಿ ವೃತ್ತಿಯನ್ನು ಕೈಗೊಳ್ಳಲು ಹಾಗೂ ವಕೀಲರ ಸಂಘದಲ್ಲಿ ತಮ್ಮ ಹೆಸರನ್ನು ನೋದಾಯಿಸಿಕೊಳ್ಳಲು ಸಹಾಯವಾಗುವಂತೆ ರೂ . 5000-00.ಗಳ ಧನಸಹಾಯ ನೀಡಲಾಗುತ್ತದೆ.

ಸ್ವಯಂ ಉದ್ಯೋಗ ತರಬೇತಿ ಕಾರ್ಯಕ್ರಮ (ಮೋಟಾರು ವಾಹನ ತರಬೇತಿ)

ಪರಿಶಿಷ್ಟ ವರ್ಗಕ್ಕೆ ಸೇರಿದ ನಿರುದ್ಯೋಗಿ ಯುವಕ /ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗುವಂತೆ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಲಘು ವಾಹನ ಚಾಲನೆ ಮತ್ತು ಆಟೋರಿಕ್ಷಾ ಚಾಲನೆಯಲ್ಲಿ 1ತಿಂಗಳ ತರಬೇತಿ ನೀಡಿ ನಂತರ ವಾಹನ ನಡೆಸಲು ಪರವಾನಗಿ ಸಹ ಒದಗಿಸಲಾಗುತ್ತದೆ . ತರಬೇತಿ ಅವಧಿಯಲ್ಲಿ ರೂ. 150-00/ 300-00ಶಿಷ್ಯ ವೇತನ ನೀಡಲಾಗುವುದು.

ನರ್ಸರಿ ಮತ್ತು ಮಹಿಳ ಕಲ್ಯಾಣ ಕೇಂದ್ರಗಳು

ಪರಿಶಿಷ್ಟ ವರ್ಗದವರ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಹೋಗುವ ಅಭ್ಯಾಸ ರೂಡಿಸಲು ಈ ಯೋಜನೆ ರೂಪಿಸಲಾಗಿದೆ . ಮೂರರಿಂದ ಐದು ವರ್ಷ ವಯಸ್ಸಿನ ಮಕ್ಕಳು ಇಂತಹ ಕೇಂದ್ರದಲ್ಲಿ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ . ಮಕ್ಕಳಿಗೆ ಮದ್ಯಾಹ್ನದ ಉಪಹಾರವನ್ನು ಕೇಂದ್ರದಲ್ಲಿ ನೀಡಲಾಗುವುದು .

ವಿದ್ಯಾರ್ಥಿಗಳಿಗಾಗಿ ಆಶ್ರಮ ಶಾಲೆಗಳು

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಶ್ರಮ ಶಾಲೆಗಳನ್ನು ಸ್ಥಾಪಿಸಲಾಗಿದೆ . ವಿದ್ಯಾರ್ಥಿಗಳಿಗೆ ಉಚಿತ ಊಟ ,ಸಮವಸ್ತ್ರ ,ಲೇಖನ ಸಾಮಗ್ರಿ ಇತ್ಯಾದಿ ಶಿಕ್ಷಣ ಸವಲತ್ತುಗಳನ್ನು ಒದಗಿಸಲಾಗುವುದು . ಈ ಆಶ್ರಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ 1 ರಿಂದ 5ನೇ ತರಗತಿಯವರೆಗೂ ಅವಕಾಶವಿರುತ್ತದೆ. ಗ್ರಾಮಾಂತರ ಪ್ರದೇಶದ ಸುತ್ತಮುತ್ತಲಿನ ಪರಿಶಿ...

ಹೆಚ್ಚು ಓದಲು